ನೋಡು ನೋಡು ಕಣ್ಣಾರ ನಿಂತಿಹಳು - Nodu Nodu Kannara Nintihaḷu

Kantharaj Kabali
0


ಶ್ರೀ ಚಾಮುಂಡೇಶ್ವರಿ ದೇವಿ
Sri Chamundeshwari Devi Devotional Song Lyrics


ನೋಡು ನೋಡು ಕಣ್ಣಾರ ನಿಂತಿಹಳು

ನಗು ನಗುತ ಚಾಮುಂಡಿ ನಿಂತಿಹಳು

ತಾಯಿ ಹೃದಯ ತಂದಾ ತುಂಬು ಮಮತೆ ಇಂದಾ

ಬಾ ಇಲ್ಲಿ  ಕಂದ ಎನುತಿಹಳು

ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು …

 

ನೋಡು ನೋಡು ಕಣ್ಣಾರ ನಿಂತಿಹಳು

ನಗು ನಗುತ ಚಾಮುಂಡಿ ನಿಂತಿಹಳು


 

ಮೈಸೂರು ನಗರದ ಬೆಟ್ಟದ ಮೇಲೆ

ಮಹಿಸಾಸುರ ಮರ್ಧಿನಿಯ ವೈಭವ ಲೀಲೆ

ಧನುಜ ಸಂಹಾರಿಣೀ ತ್ರಿಭುವನ ಪೋಷಿಣಿ

ಶಂಕರನ ರಾಣಿಗೀವ ಹೂಗಳ ಮಾಲೆ

 

ನೋಡು ನೋಡು ಕಣ್ಣಾರ ನಿಂತಿಹಳು

ನಗು ನಗುತ ಚಾಮುಂಡಿ ನಿಂತಿಹಳು


 

ನಂಬಿರುವ ಭಕ್ತರ ರಕ್ಷೆಗಾಗಿನಂಬದಿಹ ದುಷ್ಟರ ಶಿಕ್ಷೆಗಾಗಿ

ನಂಬಿರುವ ಭಕ್ತರ ರಕ್ಷೆಗಾಗಿನಂಬದಿಹ ದುಷ್ಟರ ಶಿಕ್ಷೆಗಾಗಿ

ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ

ಕರುನಾಡ ಮಕ್ಕಳ ಹಿರಿ ದೈವವಾಗಿ

 

ನೋಡು ನೋಡು ಕಣ್ಣಾರ ನಿಂತಿಹಳು

ನಗು ನಗುತ ಚಾಮುಂಡಿ ನಿಂತಿಹಳು


 

ಉಕ್ಕಿ ಬಹ ನದಿಯಲ್ಲಿ ಅವಳ ನಗೆ

ಬೀಸಿ ಬಹ ಗಾಳಿಯಲಿ ಅವಳುಸಿರು

ಹಸಿ ಹಸಿರು ಪೈರುಗಳೇ ಅವಳುಡುಗೆ

 ತಾಯಿ ರೂಪವೋ ಹಲವು ಬಗೆ

 

 

ನೋಡು ನೋಡು ಕಣ್ಣಾರ ನಿಂತಿಹಳು

ನಗು ನಗುತ ಚಾಮುಂಡಿ ನಿಂತಿಹಳು

ತಾಯಿ ಹೃದಯ ತಂದಾ ತುಂಬು ಮಮತೆ ಇಂದಾ

ಬಾ ಇಲ್ಲಿ  ಕಂದ ಎನುತಿಹಳು

ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು...


ನೋಡು ನೋಡು ಕಣ್ಣಾರ ನಿಂತಿಹಳು

ನಗು ನಗುತ ಚಾಮುಂಡಿ ನಿಂತಿಹಳು


~~~☆~~~

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top