ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ - Koti Koti Namana Ninage Mahagaṇapati

Kantharaj Kabali
0

Koti Koti Namana Ninage Mahagaapati Lyrics 

Ganapathi Kannada Song Lyrics


ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ

ಲಕ್ಷ ಲಕ್ಷ ದೀಪಾರ್ಚನೆ ದಿವ್ಯಗಣಪತಿ

||ಕೋಟಿ ಕೋಟಿ||

ಮಹಾಗಣಪತಿ ದಿವ್ಯಗಣಪತಿ

ಮಹಾ…ಗಣಪತಿ


ಇಳಿದು ಬಾ,ಇಳಿದು ಬಾ,ಇಳಿದು ಬಾ ಗಣಪತಿ

ಕೈಲಾಸ ಗಿರಿಯಿಂದ ಧರೆಗಿಳಿದು ಬಾ

||ಇಳಿದು ಬಾ||

ಬೆಳಗಿ ಬಾ , ಹೊಳೆದು ಬಾ||2||

ಗಣಪತಿ ಗಣಪತಿ

ಮುತ್ತಿರುವ ಕತ್ತಲನ್ನು ದೂರ ಮಾಡು ಬಾ||2||

||ಕೋಟಿ ಕೋಟಿ||


ಅಕ್ಕರೆಯ ಆಕಾರ ಮೈ ತಳೆದು ಬಾ

ಸೌಮ್ಯದ ಸಾಕಾರ ಮೂರ್ತಿಯಾಗಿ ಬಾ

||ಅಕ್ಕರೆಯ||

ನಲಿದು ಬಾ ,ಒಲಿದು ಬಾ||2||

ಗಣಪತಿ ಗಣಪತಿ

ಇಳೆಯತ್ತ ಹರುಷ ವರುಷ

ಸುರಿಸುತ್ತ ಬಾ ಬಾ||ಇಳೆಯತ್ತ||

||ಕೋಟಿ ಕೋಟಿ ||


ಕೈ ಮುಗಿದು ಬೇಡುತಿರುವೆ ಕರುಣಾಕರ

ಲೋಕರಕ್ಷಕ ಹೇ ವಿಘ್ನೇಶ್ವರ||ಕೈ ಮುಗಿದು||

ನಮ್ಮ ಎದೆಯಲಿ , ನೆಲದಲಿ||2||

ಗಣಪತಿ ಗಣಪತಿ

ಸದಾ ಇದ್ದು ನಮ್ಮನ್ನು ಹರಸು ಹರಸು ಬಾ||2||

||ಕೋಟಿ ಕೋಟಿ||

~~~ * ~~~

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top