LakshmoDevi Kannada Song Lyrics
ಬಂದಾಳೋ ನಮ್ಮಾ ಮನೆಗೆ | ಶ್ರೀ ಮಹಾಲಕ್ಷ್ಮೀ|
ಸಂಜೆಯಾ ಹೊತ್ತಿನಲ್ಲೀ||
ಬಂದಾಳೋ ನಮ್ಮ ಮನೆಗೆ | ನಿಂದಾಳೋ ಗೃಹದಲ್ಲಿ| ನಂದ ಕಂದನ ರಾಣಿ | ಇಂದೀರೆ ನಮ್ಮಾ ಮನೆಗೆ||ಅ. ಪ||
ಹೆಜ್ಜೆ ಮೇಲೆ ಹೆಜ್ಜೆಯ ನಿಕ್ಕುತಾ | ಗೆಜ್ಜೆ ಕಾಲು ಘಲ್ಲು ಘಲ್ಲೆಂದೇನೂತ | ಮೂರ್ಜಗ ಮೋಹಿಸುತ |
ಮುರಹರನ ರಾಣಿಯು | ಸಂಪತ್ತು ಕೊಡಲಿಕ್ಕೆ
ವಾಸುದೇವರ ಸಹಿತ ||೧||
ಶ್ರಾವಣ ಮಾಸ ಸಂಪತ್ತು | ಶುಕ್ರವಾರ ಪೂರ್ಣಿಮೆ ದಿನದಲ್ಲಿ| ಭೂಸುರರೆಲ್ಲ ಸೇರಿ |
ಸಾಸಿರ ನಾಮ ಪಾಡಿ | ವಾಸವಾಗಿರಲಿಕ್ಕೆ ವಾಸುದೇವನ ಸಹಿತ||೨||
ಕನಕವಾಯಿತು ಮಂದಿರ | ಜನನಿ ಬರಲು|
ಜಯ ಜಯ ಜಯ ವೆನ್ನಿರೇ| ಸನಕಾದಿ ಮುನಿಗಳ| ಸೇವೆಯ ಸ್ವೀಕರಿಸಿ | ಕನಕವಲ್ಲಿಯೂ
ತನ್ನ| ಕಾಂತನ್ನ ಕರೆದು ಕೊಂಡು||೩||
ಉಟ್ಟ ಪೀತಾoಬರ ಹೊಳೆಯುತ್ತಾ | ಖರದಲ್ಲಿ
ಗಟ್ಟಿ ಕಂಕಣ ವಿಡುತಾ |ಸೃಷ್ಠಿ ಗೋಡೆಯ ನಮ್ಮ |
ಪುರಂದಾರ ವಿಠ್ಠಲನಾ |ಪಟ್ಟದರಸಿಯು ನಮ್ಮ
ಇಷ್ಟಾರ್ಥ ಕೊಡಲಿಕ್ಕೆ||೪||
~~~ * ~~~